CAL

ಹಿನ್ನೆಲೆ :

ಪ್ರಾಥಮಿಕ ಸಾರ್ವತ್ರೀಕರಣಕ್ಕೆ ಉತ್ತೇಜನ ನೀಡಲು ಭಾರತ ಸರ್ಕಾರದ ಮಂಚೂಣಿ ಕಾರ್ಯಕ್ರಮವಾದ ಸರ್ವ ಶಿಕ್ಷಣ ಅಭಿಯಾನವು ಪ್ರಾಥಮಿಕ  ಶಿಕ್ಷಣದ ಗುಣಮಟ್ಟವನ್ನು ಉತ್ತಮಪಡಿಸಲು ಹಲವು ವಿಶಿಷ್ಟ ಲಕ್ಷಣಗಳನ್ನು ಹೊಂದಿದೆ.  ಶಾಲೆಗಳಲ್ಲಿನ ಭೌತಿಕವಾಗಿ ಲಭ್ಯವಿರುವ ಸ್ಥಳಗಳನ್ನು ಕಲಿಕೆಯ ಸ್ಥಳಗಳನ್ನಾಗಿ ಪರಿವರ್ತಿಸಬೇಕಾದರೆ ಕೆಲವು ಮೂಲ ಮುನ್ನೇರ್ಪಾಡುಗಳನ್ನು ಮಾಡುವುದು ಅತ್ಯಗತ್ಯ.  ತರಗತಿಯಲ್ಲಿ ಶಿಕ್ಷಕರು ಬೋಧಿಸುವಾಗ ತರಗತಿಯಲ್ಲಿಯೇ ನಿಯಮಿತವಾಗಿ ಅವರಿಗೆ ಶೈಕ್ಷಣಿಕವಾಗಿ ಸಹಾಯವಾಗುವಂಥ ಸಾಧನಗಳ ಮುನ್ನೇರ್ಪಾಡು ಅಗತ್ಯವಿದೆ.  ಇದಕ್ಕೆ ತಂತ್ರಜ್ಞಾನದ ಬಳಕೆ ಬಹುಮುಖ್ಯ.  ದೃಶ್ಯ ಮಾಧ್ಯಮದ ಮುಖಾಂತರ ತರಗತಿಯಲ್ಲಿನ ಕಾರ್ಯಕಲಾಪಗಳಲ್ಲಿ ಬದಲಾವಣೆಯನ್ನು ಉಂಟುಮಾಡಲು ಸರ್ವ ಶಿಕ್ಷಣ ಅಭಿಯಾನದ ಅಡಿಯಲ್ಲಿ ಕಂಪ್ಯೂಟರ್ ಸಹಾಯಿತ ಕಲಿಕಾ(ಸಿ.ಎ.ಐ) ಕಾರ್ಯಕ್ರಮವನ್ನು ಪ್ರಾರಂಭಿಸಲಾಗಿದೆ. ಇದರಿಂದ ಮೌಲ್ಯಮಾಪನವನ್ನು ಒಳಗೊಂಡ ಕಲಿಕೆಯು ಸಾಧ್ಯವಾಗುತ್ತದೆ.

ಬೋಧನೆ ಮತ್ತು ಕಲಿಕೆಯ ಚಟುವಟಿಕೆಗಳಿಗೆ ಕಂಪ್ಯೂಟರ್ ಬಳಕೆ ಪರಿಣಾಮಕಾರಿಯಾಗಿರುತ್ತದೆ.  ಕ್ಷೇತ್ರ ಅಧಿಕಾರಿಗಳ ಪ್ರತಿಪುಷ್ಠಿಯ ಪ್ರಕಾರ ಸಿ.ಎ.ಎಲ್. ಶಾಲೆಗಳಲ್ಲಿ ಓದುತ್ತಿರುವ ಮಕ್ಕಳ ಕಲಿಕೆಯ ಮಟ್ಟದಲ್ಲಿ ಗಮನಾರ್ಹ ಪ್ರಗತಿಯಾಗುತ್ತಿದೆ.  ಲಭ್ಯ ಹಿಮ್ಮಾಹಿತಿಗಳ ಆಧಾರದ ಮೇಲೆ ಈ ಕಾರ್ಯಕ್ರಮದ ಸಫಲತೆಯಿಂದ ಪ್ರೋತ್ಸಾಹನಗೊಂಡ SSA ಹಲವಾರು ವರ್ಷಗಳಿಂದ ಈ ಕಾರ್ಯಕ್ರಮವನ್ನು ವಿಸ್ತರಿಸುತ್ತಾ ಬಂದಿದೆ.

ಸಿ.ಎ.ಎಲ್ ಉದ್ದೇಶಗಳು :

 • ಮಕ್ಕಳ ಸಾಧನೆಯ ಮಟ್ಟವನ್ನು ಉತ್ತಮಪಡಿಸುವುದು, ಶಾಲೆಗಳಿಂದ ಹೊರಗುಳಿದ ಮಕ್ಕಳನ್ನು ಶಾಲೆಗೆ ಸೇರುವಂತೆ ಆಕರ್ಷಿಸುವುದು ಮತ್ತು ಹಾಜರಾತಿ ದರವನ್ನು ಉತ್ತಮಪಡಿಸುವುದು.
 • ಶಿಕ್ಷಕರಿಗೆ ಪರ್ಯಾಯವಾಗುವುದರ ಬದಲು ಬೋಧನೆಗೆ ಪೂರಕವಾಗುವುದು.
 • ಆಧುನಿಕ ತಂತ್ರಜ್ಞಾನದ ಮುಖಾಂತರ ಕಲಿಕೆಗೆ ಸಾಧ್ಯತೆಯನ್ನು ಒದಗಿಸಿ ಗ್ರಾಮೀಣ ಸರ್ಕಾರಿ ಶಾಲೆಗಳ ಮಕ್ಕಳೆಡೆಗೆ ಗಮನವನ್ನು ಕೇಂದ್ರೀಕರಿಸುವುದು.
 • ವಾರಕ್ಕೆ 2 ಅವಧಿಯನ್ನು ಮೀಸಲಾಗಿಡುವ ಮೂಲಕ CALನ್ನು ಶಾಲಾ ಪಠ್ಯಕ್ರಮದೊಡನೆ ಸಮಗ್ರಗೊಳಿಸುವುದು.

ಸಿ.ಎ.ಎಲ್ ಅನುಷ್ಠಾನ :

ಕಲಿಕೆಯನ್ನು ಉತ್ತಮಪಡಿಸುವುದು ಕಂಪ್ಯೂಟರ್ ಸಹಾಯಿತ ಕಲಿಕಾ ಕೇಂದ್ರದ ಮುಖ್ಯ ಗುರಿಯಾಗಿರುವುದರಿಂದ ಮತ್ತು ಗ್ರಾಫಿಕ್ಸ್, ಅನಿಮೇಷನ್ ಮುಂತಾದ ಪೂರಕ ಪಠ್ಯ ವಿಷಯಗಳನ್ನೊಳಗೊಂಡ ಡಿಜಿಟಲ್ ಮಾದರಿ ಡಿ.ವಿ.ಡಿಗಳನ್ನು ಸಹ ಕಾರ್ಯಕ್ರಮವನ್ನು ಉತ್ತಮಪಡಿಸಲು ಈ ಕೆಳಕಂಡ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ;

 • ಸರ್ವ ಶಿಕ್ಷಣ ಅಭಿಯಾನದಡಿಯಲ್ಲಿನ ಅನುದಾನದ ಲಭ್ಯತೆಗನುಸಾರವಾಗಿ ಪ್ರತಿ ಸಾಲಿನಲ್ಲೂ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳನ್ನು CALಗೆ ಒಳಪಡಿಸಲಾಗುವುದು.  ಪೂರ್ವಭಾವಿಯಾಗಿ ಶೈಕ್ಷಣಿಕ ಅಂಶಗಳನ್ನು ಕಂಪ್ಯೂಟರ್ ಅಳವಡಿಸಿ, ಕಂಪ್ಯೂಟರ್ ಮತ್ತು ಯು.ಪಿ.ಎಸ್ ಗಳನ್ನು CAL ಶಾಲೆಗಳಿಗೆ ಒದಗಿಸಲಾಗುವುದು.
 • 22567 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಇಲ್ಲಿಯವರೆಗೂ 4301 ಶಾಲೆಗಳನ್ನು CALಗೆ ಒಳಪಡಿಸಲಾಗಿದೆ ಅಂದರೆ ಶೇಕಡ 19.05%.  892979 ಫಲಾನುಭವಿಗಳು ಮತ್ತು 28297 ಶಿಕ್ಷಕರು ಈ ಕಂಪ್ಯೂಟರ್ ಆಧಾರಿತ ಶಿಕ್ಷಣ ಕಾರ್ಯಕ್ರಮದಿಂದ ಪ್ರಯೋಜನವನ್ನು ಪಡೆದಿದ್ದಾರೆ.
 • ಪ್ರತಿ ಸಿ.ಎ.ಎಲ್.ಸಿ ಶಾಲೆಗೆ 05 ಡೆಸ್ಕ್ ಟಾಪ್  ಕಂಪ್ಯೂಟರ್ ಗಳು ಮತ್ತು ಒಂದು ಯು.ಪಿ.ಎಸ್ ಅನ್ನು ಒದಗಿಸಲಾಗಿದೆ.
 • ಶಾಲೆಯಲ್ಲಿನ ಕಂಪ್ಯೂಟರ್ ಲ್ಯಾಬ್ ನಲ್ಲಿ ಕಂಪ್ಯೂಟರ್ ಗಾಗಿ ವಿದ್ಯುತ್ತ್ ಶಕ್ತಿ, ಅರ್ಥಿಂಗ್, ಟೇಬಲ್ ಮತ್ತು ಚೇರ್ ಗಳ ವ್ಯವಸ್ಥೆಯನ್ನು ಮಾಡಲಾಗುತ್ತದೆ.
 • ವಿಜ್ಞಾನ, ಸಾಮಾನ್ಯ ವಿಜ್ಞಾನ, ಸಮಾಜ ಪರಿಚಯ ಮತ್ತು ಭಾಷೆಗಳಲ್ಲಿನ ಕ್ಲಿಷ್ಟ ವಿಷಯಗಳಿಗೆ  ವಿಡಿಯೋ ಮತ್ತು ಆಡಿಯೋ ಕ್ಲಿಪಿಂಗ್ ನೊಂದಿಗೆ ವಿವಿಧ ಸಂಸ್ಥೆಗಳಿಂದ ತಯಾರಿಸಿದ ಸಿ.ಡಿಗಳನ್ನು, ಕನ್ನಡ ಮತ್ತು ಆಂಗ್ಲಬಾಷೆಗಳಲ್ಲಿ 185 ಶೈಕ್ಷಣಿಕ ಪಾಠಗಳನ್ನೊಳಗೊಂಡ ಡಿವಿಡಿಗಳ ಪ್ರತಿಗಳನ್ನು ಮಾಡಿಸಿ ಎಲ್ಲಾ ಸಿ.ಎ.ಎಲ್.ಸಿ ಶಾಲೆಗಳಿಗೆ ಸರಬರಾಜು ಮಾಡಲಾಗಿದೆ.
 • ಪ್ರತಿ ಸಿ.ಎ.ಎಲ್.ಸಿ ಶಾಲೆಯಿಂದ ಇಬ್ಬರು ಶಿಕ್ಷಕರಿಗೆ ಕಂಪ್ಯೂಟರ್ ನ ತರಬೇತಿಯನ್ನು, ಶೈಕ್ಷಣಿಕ ಡಿ.ವಿ.ಡಿಗಳನ್ನು ಉಪಯೋಗಿಸುವ ಬಗ್ಗೆ ತರಬೇತಿಯನ್ನು ನೀಡಲಾಗಿದೆ.  ಇಲ್ಲಿಯವರೆಗೆ 13155 ಸಹಶಿಕ್ಷಕರು, 6222 ಮುಖ್ಯ ಶಿಕ್ಷಕರಿಗೆ ಸಿ.ಎ.ಎಲ್.ಸಿ ಕೇಂದ್ರಗಳ ಪ್ರಾಮುಖ್ಯತೆ, ಉದ್ದೇಶಗಳೊಂದಿಗೆ ತರಬೇತಿಯನ್ನು ನೀಡಲಾಗಿದ್ದು, ಕಂಪ್ಯೂಟರ್ ಮತ್ತು ಯು.ಪಿ.ಎಸ್ ಗಳ ಕಾರ್ಯ ನಿರ್ವಹಣೆ ಮಾಡುವ ಮತ್ತು ವಾರ್ಷಿಕ ನಿರ್ವಹಣೆಯ ಉಪಯೋಗವನ್ನು ಪಡೆಯುವ ಬಗ್ಗೆ ತರಬೇತಿಯನ್ನು ನೀಡಲಾಗಿದೆ.
 • ಶಿಕ್ಷಕರ ತರಬೇತಿಯಲ್ಲಿ ಸಾಮರ್ಥ್ಯಾಭಿವೃದ್ಧಿಗೆ ಕಂಪ್ಯೂಟರ್ ಗಳನ್ನು ಕ್ರಿಯಾತ್ಮಕವಾಗಿ ಬಳಸಲು ಹಾಗೂ ದಿನನಿತ್ಯದ ಬೋಧನೆ-ಕಲಿಕೆಯಲ್ಲಿ ಕಂಪ್ಯೂಟರ್ ಗಳನ್ನು ಬಳಸಿ ಸ್ವತಃ ಬೋಧನಾ-ಕಲಿಕಾ ಸಂಪನ್ಮೂಲಗಳನ್ನು ಸಿದ್ಧಗೊಳಿಸಲು ಸಮರ್ಥರನ್ನಾಗಿಸುವುದು.
 • ಬೋಧನೆ-ಕಲಿಕೆಯ ಪ್ರಕ್ರಿಯೆಯಲ್ಲಿ ಶೈಕ್ಷಣಿಕ ತಂತ್ರಜ್ಞಾನದ ಬಳಕೆ ಹಾಗೂ ಅದಕ್ಕೆ ಅನುಗುಣವಾಗಿ ಪಾಠಯೋಜನೆ ಮಾಡುವುದನ್ನು ಶಿಕ್ಷಕರಿಗೆ ಅಣಿಗೊಳಿಸುವುದು ತರಬೇತಿಯ ಪ್ರಮುಖ ಉದ್ದೇಶವಾಗಿದೆ.
 • ಮೇಲಿನ ಹಂತದಿಂದ-ಕೆಳಹಂತದವರೆಗಿನ ಎಲ್ಲರೂ ಶಿಕ್ಷಕರೊಂದಿಗೆ ಸಂವಾದ, ಚರ್ಚೆ, ಮಾಡುವುದರೊಂದಿಗೆ ಅವರು ಸ್ವಯಂ ಪ್ರೇರಿತವಾಗಿ ಪುನಃಶ್ಚೇತನಗೊಳ್ಳುವಂತೆ ಮಾಡಲು ಉಸ್ತುವಾರಿ ಅಧಿಕಾರಿಗಳನ್ನು ರಾಜ್ಯದ ಎಲ್ಲಾ ಡಯಟ್ ಗಳಲ್ಲಿ ನೇಮಕ ಮಾಡಲಾಗಿದೆ.  ಡಯಟ್ ನ ಇಟಿ-ವಿಭಾಗದ ನೋಡಲ್ ಅಧಿಕಾರಿಗಳು, ಕಂಪ್ಯೂಟರ್ ಪ್ರೊಗ್ರಾಮರ್ ಗಳು ಸಿ.ಎ.ಎಲ್.ಸಿಯ ನೋಡಲ್ ಅಧಿಕಾರಿಗಳಾಗಿ ಆಡಳಿತಾತ್ಮಕವಾಗಿ ಮತ್ತು ತಾಂತ್ರಿಕವಾಗಿ ಈ ಕಾರ್ಯಕ್ರಮದ ಮೇಲುಸ್ತುವಾರಿ ಮತ್ತು ಅನುಷ್ಠಾನಕ್ಕೆ ಸಹಯೋಗವನ್ನು ನೀಡುತ್ತಿದ್ದಾರೆ.
 • ಪ್ರಾಥಮಿಕ ಶಾಲೆಗಳಲ್ಲಿ ಕಂಪ್ಯೂಟರ್ ಶಿಕ್ಷಣದ ಪ್ರಾಮುಖ್ಯತೆ ಮತ್ತು ಅದರ ಅಳವಡಿಕೆ ಬಗ್ಗೆ ಶಾಲಾ ಶಿಕ್ಷಕರು ಮತ್ತು ಮುಖ್ಯ ಶಿಕ್ಷಕರು ಸ್ಥಿರವಾದ ಅನುಪಾಲನೆ ಮಾಡಲಾಗುತ್ತದೆ.  ಅದರಲ್ಲೂ ಮುಖ್ಯವಾಗಿ ಶಿಕ್ಷಕರು ಸ್ವಯಂ ಪ್ರೇರಣೆಯಿಂದ ಪ್ರಾಜೆಕ್ಟ್ ಗಳನ್ನು ತಯಾರಿಸಿ, ಅವುಗಳನ್ನು ತರಗತಿಯಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಕಲಿಕೆಗೆ ಪೂರೈಸಿಕೊಳ್ಳುವುದು.