QMT

ಪರಿಚಯ :

ಭಾರತ ಸರ್ಕಾರದ ಸರ್ವ ಶಿಕ್ಷಣ ಅಭಿಯಾನವು 6 ರಿಂದ 14 ವರ್ಷದ ವಯೋಮಾನದ ಎಲ್ಲಾ ಮಕ್ಕಳಿಗೂ ಪ್ರಾಥಮಿಕ ಹಂತದಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ನೀಡಬೇಕೆಂದು ಸರ್ವ ಶಿಕ್ಷಣ ಅಭಿಯಾನ ಯೋಜನೆಯ ಮೂಲಕ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. 2005 ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟಿನಲ್ಲಿ ಸೂಚಿಸಿರುವಂತೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವ ಬದ್ಧತೆಯನ್ನು ಸೂಚಿಸಿದೆ. ಉತ್ತಮ ಗುಣಮಟ್ಟದ ಶಿಕ್ಷಣ ನೀಡಲು ಕೆಲವು ಆಯಾಮಗಳಲ್ಲಿ ಬದಲಾವಣೆ ತರಬೇಕಾಗುತ್ತದೆ. ಅಂತಹ ಆಯಾಮಗಳೆಂದರೆ.

ಮೂಲಭೂತ ಸೌಲಭ್ಯ :

 1. ನಿರ್ವಹಣೆ ಮತ್ತು ಸಮುದಾಯದ ಸಹಯೋಗ
 2. ಶಾಲೆ ಮತ್ತು ತರಗತಿ ದಾಖಲಾರಿ ಮತ್ತು ಹಾಜರಾತಿ
 3. ಪಠ್ಯಕ್ರಮ ಮತ್ತು ಬೋಧನಾ ಕಲಿಕಾ ಸಾಮಗ್ರಿಗಳು
 4. ಶಿಕ್ಷಕ ಮತ್ತು ಶಿಕ್ಷಕನ ಪೂರ್ವ ತಯಾರಿ
 5. ಸಮಯಾವಕಾಶ (ಬೋಧನೆ ಮತ್ತು ಕಲಿಕಾ ಸಮಯ)
 6. ತರಗತಿ ಚಟುವಟಿಕೆ ಮತ್ತು ನಿರ್ವಹಣೆ
 7. ಕಲಿಕಾರ್ಥಿಯು ಮೌಲ್ಯಮಾಪನ ಮತ್ತು ನಿರ್ವಹಣೆ ಮತ್ತು ಮೇಲುಸ್ತುವಾರಿ
 • ಮಕ್ಕಳ ಪ್ರವೇಶ ಅವಕಾಶ, ದಾಖಲಾತಿ ಮತ್ತು ಉಳಿಸಿಕೊಳ್ಳುವಿಕೆಯಲ್ಲಿ ಗಮನಾರ್ಹ ಪ್ರಗತಿಯಾಗಿದ್ದರೂ ಗುಣಾತ್ಮಕತೆಗೆ ಸಂಬಂಧಿಸಿದಂತೆ ಪರಿಹರಿಸಬೇಕಾದ ಹಾಗೂ ಉಸ್ತುವಾರಿ ನೋಡಬೇಕಾದ ವಿವಾದಾಂಶಗಳು ಹಾಗೆಯೇ ಉಳಿದಿದೆ.
 • ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆ, ಭಾರತ ಸರ್ಕಾರ – ಇವರು ಸರ್ವ ಶಿಕ್ಷಣ ಅಭಿಯಾನ ಆಶ್ರಯದಲ್ಲಿ ಉಸ್ತುವಾರಿ ಮತ್ತು ಮೇಲ್ವಿಚಾರಣೆಗೆಂದು ಒಂದು ಬೃಹತ್ ಕಾರ್ಯಕ್ರಮವನ್ನು ಜಾರಿಗೊಳಿಸಲು ಮುಂದೆ ಬಂದಿದ್ದಾರೆ. ಎನ್.ಸಿ.ಇ.ಆರ್.ಟಿ ಸಂಸ್ಥೆಗೆ 2007-08 ರ ಅವಧಿಯಿಂದ ವಿಶಾಲ ಪರಾಮರ್ಶನೆಯನ್ನು ಆಧರಿಸಿ ಗುಣಾತ್ಮಕತೆಯ ಆಯಾಮಗಳಿಗೆ ಉಸ್ತುವಾರಿ ನಮೂನೆಗಳನ್ನು ವಿಕಾಸಗೊಳಿಸುವ ಕಾರ್ಯವನ್ನು ವಹಿಸಲಾಗಿತ್ತು. ಎನ್.ಸಿ.ಇ.ಆರ್.ಟಿ.ಯಿಂದ ಕೊಡಲಾದ ಮಾರ್ಗದರ್ಶಿಯ ಆಧಾರದ ಮೇಲೆ ಗುಣಾತ್ಮಕತೆಯ ಉಸ್ತುವಾರಿ ಸಾಧಕಗಳನ್ನು ಪರಿಷ್ಕರಿಸಲಾಗಿದೆ. ವಾರ್ಷಿಕ ಎರಡು ಬಾರಿ ಕ್ರೋಢಿಕೃತ ಪ್ರಗತಿಯನ್ನು ಕಳಿಸಲಾಗುತ್ತಿದೆ. ಈ ನಮೂನೆಗಳು ಹಾಜರಾತಿ,  ಸಹಭಾಗಿತ್ವ ತರಗತಿಯ ಚಟುವಟಿಕೆಗಳು ಮತ್ತು ಕಲಿಕಾ ಸಾಧನೆಗಳ ಮೇಲೆ ಪ್ರಕಾಶ ಬೀರುತ್ತವೆ.
 • ಕ್ಯೂ.ಎಂ.ಟಿ. ನಮೂನೆಗಳಲ್ಲಿ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸುವ ದೃಷ್ಠಿಯಿಂದ ಕೆಲವು ಆಯಾಮಗಳನ್ನು ನಮೂನೆಗಳಲ್ಲಿ ಅಳವಡಿಲಾಗಿದೆ

ಮಕ್ಕಳ ಹಾಜರಾತಿ:

 • ಸಮುದಾಯದ ಸಹಕಾರ ಮತ್ತು ಸಹಭಾಗಿತ್ವ
 • ಶಿಕ್ಷಕ ಮತ್ತು ಶಿಕ್ಷಕರ ತಯಾರಿ
 • ಪಠ್ಯಕ್ರಮ, ಬೋಧನೆ ಮತ್ತು ಕಲಿಕಾ ಸಾಮಗ್ರಿ
 • ತರಗತಿ ನಿರ್ವಹಣೆ
 • ಕಲಿಕಾರ್ಥಿಯ ಮೌಲ್ಯ ಮಾಪನ ನಿರ್ವಹಣೆ ಮತ್ತು ಮೇಲುಸ್ತುವಾರಿ

ಎನ್.ಸಿ.ಇ.ಆರ್.ಟಿ.ಯ ನಿರ್ದೇಶನದಂತೆ ಕ್ಯೂ.ಎಂ.ಟಿ. ನಮೂನೆಗಳನ್ನು ಪರಿಷ್ಕರಿಸಿ, ಪ್ರಾದೇಶಿಕ ಭಾಷೆಗೆ ಭಾಷಾಂತರಿಸಿ, ಮುದ್ರಿಸಿ ಶಾಲೆಗಳಿಗೆ ಕ್ಲಸ್ಟರ್ ಮತ್ತು ಬ್ಲಾಕ್‍ನ ಬಿ.ಆರ್.ಸಿ. ಕೇಂದ್ರಗಳಿಗೆ ಸರಬರಾಜು ಮಾಡಲಾಗಿದೆ. ಸಂಗ್ರಹಿತವಾದ ಮಾಹಿತಿಗಳನ್ನು ವಾರ್ಷಿಕ ಎರಡು ಹಂತಗಳಲ್ಲಿ ಎನ್.ಸಿ.ಇ.ಆರ್.ಟಿ.ಗೆ ಮಾಹಿತಿಯನ್ನು  ಸಲ್ಲಿಸಲಾಗುತ್ತಿದೆ. ಮೇಲುಸ್ತುವಾರಿ ನಮೂನೆ ಶಾಲಾ ಪ್ರಗತಿಯ ಪರಿಶೀಲನೆ, ದಾಖಲಾತಿ ಪರಿಶೀಲನೆ, ಪರಿಹಾರೋಪಾಯಗಳು ಶಾಲೆಗೆ ಸಂಬಂಧಿಸಿದ ಶೈಕ್ಷಣಿಕ ಕಾರ್ಯಚಟುವಟಿಕೆಗಳನ್ನು ಒಳಗೊಂಡಿದೆ.