SARVA SIKSHANA ABHIYAN

ಗುರಿಗಳು :

  • 14 ವರ್ಷ ವಯೋಮಾನದವರೆಗಿನ ಎಲ್ಲಾ ಮಕ್ಕಳಿಗೆ 1 ರಿಂದ 8ನೇ ತರಗತಿಯ ಹಿರಿಯ ಪ್ರಾಥಮಿಕ ಶಿಕ್ಷಣದ ಸಾರ್ವತ್ರೀಕ ಲಭ್ಯತೆಯನ್ನು ಒದಗಿಸುವುದು
  • ಹಿರಿಯ ಪ್ರಾಥಮಿಕ ಶಿಕ್ಷಣಕ್ಕೆ ದಾಖಲಾತಿ ಮತ್ತು ಶಾಲೆಯಲ್ಲಿ ಉಳಿಯುವಿಕೆಯನ್ನು ಸಾರ್ವತ್ರೀಕರಣಗೊಳಿಸುವುದು ಮತ್ತು ಎಲ್ಲಾ ಮಕ್ಕಳು 8ನೇ ತರಗತಿಯನ್ನು ಪೂರ್ಣಗೊಳಿಸುವುದು
  • ಸಾರ್ವತ್ರೀಕರಣ ಎಂದರೆ ವಯೋಮಾನಕ್ಕೆ ಅನುಗುಣವಾಗಿ ದಾಖಲಾತಿ ಮತ್ತು ದಾಖಲಾದ ಎಲ್ಲಾ ವಿದ್ಯಾರ್ಥಿಗಳು ಹಿರಿಯ ಪ್ರಾಥಮಿಕ ಶಿಕ್ಷಣ ಪೂರ್ಣಗೊಳಿಸುವವರೆಗೆ ಶಾಲೆಯಲ್ಲಿ ಉಳಿಯುವಿಕೆ
  • ಜೀವನ ಕೌಶಲ್ಯ ಮತ್ತು ತೃಪ್ತಿದಾಯಕ ಗುಣಮಟ್ಟದೊಂದಿಗೆ ಅರ್ಥ ಪೂರ್ಣ ಶಾಲಾ ಶಿಕ್ಷಣ ಪೂರೈಸುವಿಕೆ
  • ಲಿಂಗ ಸಮಾನತೆ, ಸಾಮಾಜಿಕ ಗುಂಪುಗಳ ನಡುವಿನ ಸಮಾನತೆ ಹಾಗೂ ಪ್ರಾದೇಶಿಕ ಸಮಾನತೆಗಳನ್ನೋಳಗೊಂಡಂತೆ ಶೈಕ್ಷಣಿಕ ಅಭಿವೃದ್ದಿ
  • ಶಾಲೆಯ ನಿರ್ವಹಣೆಯಲ್ಲಿ ಗ್ರಾಮೀಣ ಭಾಗದ ಜನವಸತಿಗಳಲ್ಲಿನ ಸಮುದಾಯಗಳ ಪೂರ್ಣ ಭಾಗವಹಿಸುವಿಕೆ ಹಾಗೂ ಸ್ಥಳೀಯ ಸರ್ಕಾರಿ ಸಂಸ್ಥೆಗಳ ಭಾಗವಹಿಸುವಿಕೆಯ ಮೂಲಕ ‘ಸ್ವತಃ ವ್ಯವಸ್ಥಾಪಕ ಶಾಲೆಗಳು’ ಗುರಿಯೆಡೆಗೆ ನಡೆಸುವುದು

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಉಚಿತ ಹಾಗೂ ಕಡ್ಡಾಯ ಶಿಕ್ಷಣಕ್ಕಾಗಿ ಮಕ್ಕಳ ಹಕ್ಕು ಕಾಯಿದೆ 2009ರ ಅಧ್ಯಾಯ 3ನೇ ಸೆಕ್ಷನ್ (6) ರನ್ವಯ ಮಕ್ಕಳ ವಾಸಸ್ಥಳದ ಹತ್ತಿರವಿರುವ ಸೂಚಿಸಲ್ಪಟ್ಟ ನೆರೆಹೊರೆಯ ಪ್ರದೇಶಗಳಲ್ಲಿ ಸ್ಥಾಪಿಸುವುದು ಸಂಬಂಧಿಸಿದ ರಾಜ್ಯ ಸರ್ಕಾರದ ಜವಾಬ್ದಾರಿಯಾಗಿರುತ್ತದೆ. ಅದರಂತೆ ರಾಜ್ಯ ಸರ್ಕಾರವು “ಕರ್ನಾಟಕ ಉಚಿತ ಮತ್ತು ಕಡ್ಡಾಯ ಶಿಕ್ಷಣಕ್ಕಾಗಿ ಮಕ್ಕಳ ಹಕ್ಕು ಅಧಿನಿಯಮಕ್ಕೆ ಸಂಬಂಧಿಸಿದ ನಿಯಮಗಳನ್ನು” 2012 ನಲ್ಲಿ ರೂಪಿಸಿದ್ದು, ನಿಯಮ 4(1)(ಎ), 4(1)(ಬಿ) ಮತ್ತು 4(1)(ಸಿ) ಪ್ರಕಾರ ನೆರೆಹೊರೆಯ ಶಾಲೆಯನ್ನು ಈ ಕೆಳಗಿನಂತೆ ವ್ಯಾಖ್ಯಾನಿಸಲಾಗಿದೆ.

ಕಿರಿಯ ಪ್ರಾಥಮಿಕ ಶಾಲೆ :

4(1)(ಎ): ಸಾಮಾನ್ಯವಾಗಿ 1 ರಿಂದ 5ನೇ ತರಗತಿ ಮಕ್ಕಳಿಗಾಗಿ ತಮ್ಮ ವಾಸಸ್ಥಳದಿಂದ 1.ಕಿ.ಮೀ ವ್ಯಾಪ್ತಿಯ ನಡಿಗೆಯ ದೂರದ ನೆರೆಹೊರೆಯ ಪ್ರದೇಶದಲ್ಲಿ ಶಾಲೆಯನ್ನು ಸ್ಥಾಪಿಸುವುದು.

ಹಿರಿಯ ಪ್ರಾಥಮಿಕ ಶಾಲೆ :

4(1)(ಬಿ): ಸಾಮಾನ್ಯವಾಗಿ 6 ರಿಂದ 7ನೇ ತರಗತಿ ಮಕ್ಕಳಿಗಾಗಿ ತಮ್ಮ ವಾಸಸ್ಥಳದಿಂದ 3 ಕಿ.ಮೀ ವ್ಯಾಪ್ತಿಯ ನಡಿಗೆಯ ದೂರದ ನೆರೆಹೊರೆಯ ಪ್ರದೇಶದಲ್ಲಿ ಶಾಲೆಯನ್ನು ಸ್ಥಾಪಿಸುವುದು.
4(1)(ಸಿ): ಸಾಮಾನ್ಯವಾಗಿ 8ನೇ ತರಗತಿ ಮಕ್ಕಳಿಗಾಗಿ ತಮ್ಮ ವಾಸಸ್ಥಳದಿಂದ 5 ಕಿ.ಮೀ ವ್ಯಾಪ್ತಿಯ ನಡಿಗೆಯ ದೂರದ ನೆರೆಹೊರೆಯ ಪ್ರದೇಶದಲ್ಲಿ ಶಾಲೆಯನ್ನು ಸ್ಥಾಪಿಸುವುದು.
ಆದರೆ ನಗರ ಪಾಲಿಕೆಗಳು ಸ್ಥಳೀಯ ಪ್ರಾಧಿಕಾರಗಳಾಗಿರುವ ನಗರ ಪ್ರದೇಶಗಳಲ್ಲಿ ಸ್ಥಳೀಯ ಆಡಳಿತದ ಉದ್ದೇಶಕ್ಕಾಗಿ ಸೂಚಿಸಲ್ಪಟ್ಟ ವಾರ್ಡ್ ಕ್ಷೇತ್ರವು ನೆರೆಹೊರೆಯ ಕ್ಷೇತ್ರವಾಗಿರುತ್ತದೆ.

7ನೇ ತರಗತಿಯವರೆಗಿನ ಶಾಲೆಗಳಲ್ಲಿ 8ನೇ ತರಗತಿ ಪ್ರಾರಂಭ :

ರಾಜ್ಯದ ಆರ್.ಟಿ.ಇ ನಿಯಮ 4(2) ರನ್ವಯ “7ನೇ ತರಗತಿಯವರೆಗೆ ಇರುವ ಶಾಲೆಗಳಲ್ಲಿ 8ನೇ ತರಗತಿಯನ್ನು ಹಂತ ಹಂತವಾಗಿ ಪ್ರಾರಂಭಿಸಲು ರಾಜ್ಯ ಸರ್ಕಾರವು ತನ್ನ ಆರ್ಥಿಕ ಸಾಮರ್ಥ್ಯ ಹಾಗೂ ಅಭಿವೃದ್ದಿಯ ಮಿತಿಯೊಳಗೆ ಶ್ರಮಿಸುತ್ತದೆ.” ಆದರಂತೆ ಪ್ರತಿ ಜಿಲ್ಲೆಯಲ್ಲಿ ಗ್ರಾಮಾಂತರ ಹಾಗೂ ನಗರಗಳ ಜನವಸತಿ ಪ್ರದೇಶಗಳ ನೆರೆಹೊರೆಯ ಪ್ರದೇಶಗಳಲ್ಲಿ ಸರ್ಕಾರಿ, ಸರ್ಕಾರದಿಂದ ಅನುದಾನ ಪಡೆದ ಮತ್ತು ಅನುದಾನ ರಹಿತ ಶಾಲೆಗಳ ಲಭ್ಯತೆಯನ್ನು ಗುರುತಿಸಲು ಶಾಲಾ ಮ್ಯಾಪಿಂಗ್ ಕಾರ್ಯವನ್ನು ಕೈಗೊಳ್ಳಲಾಗಿದೆ. ಈ ಕಾರ್ಯದಿಂದ ಹೊಸ ಶಾಲೆಗಳ ಪ್ರಾರಂಭ, ಶಾಲೆಗಳ ಉನ್ನತೀಕರಣ ಹಾಗೂ ಸಾರಿಗೆ/ಬೆಂಗಾವಲು ಸೌಲಭ್ಯದ ಅಗತ್ಯತೆಯನ್ನು ಗುರುತಿಸಲಾಗಿರುತ್ತದೆ

ಅನುದಾನಗಳು

ಇಲಾಖಾ ವತಿಯಿಂದ ನಡೆಸುತ್ತಿರುವ ಸರ್ಕಾರಿ ಹಾಗೂ ಸರ್ಕಾರದಿಂದ ಅನುದಾನ ಪಡೆಯುತ್ತಿರುವ ಕಿರಿಯ ಹಾಗೂ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಗುಣಾತ್ಮಕ ಶಿಕ್ಷಣ ನೀಡಲು ಸರ್ವ ಶಿಕ್ಷಣ ಅಭಿಯಾನದಿಂದ ವಾರ್ಷಿಕವಾಗಿ ಶಾಲಾ ಅನುದಾನ, ಶಿಕ್ಷಕರ ಅನುದಾನ, ನಿರ್ವಹಣಾ ಅನುದಾನ ಹಾಗೂ ಕಲಿಕಾ ಬೋಧನೋಪಕರಣಗಳ ಅನುದಾನವನ್ನು ಶಾಲೆಗಳಿಗೆ ನೀಡಲಾಗುತ್ತಿದೆ.

ಕಲಿಕಾ ಬೋಧನೋಪಕರಣಗಳು (ಟಿ.ಎಲ್.ಇ) ಅನುದಾನ :

ಶಾಲೆಗಳಲ್ಲಿ ಕಲಿಕಾ ಬೋಧನಾ ಪ್ರಕ್ರಿಯೆಯನ್ನು ಉತ್ತಮ ಪಡಿಸುವ ಉದ್ದೇಶದಿಂದ ಶಿಕ್ಷಕರು ಮತ್ತು ವಿದ್ಯಾರ್ಥಿಗಳಲ್ಲಿ ಪ್ರೋತ್ಸಾಹ, ಉತ್ತೇಜನ ಮತ್ತು ಕ್ರಿಯಾಶೀಲತೆಯನ್ನು ಅಭಿವೃದ್ಧಿಪಡಿಸುವ ಸಲುವಾಗಿ ಕಲಿಕಾ ಬೋಧನಾ ಉಪಕರಣಗಳನ್ನು ಖರೀದಿಸಲು ಮತ್ತು ಬಳಸಲು ಸರ್ವ ಶಿಕ್ಷಣ ಅಭಿಯಾನ ವತಿಯಿಂದ ಅನುದಾನವನ್ನು ಪ್ರತಿ ಹೊಸ ಪ್ರಾಥಮಿಕ ಶಾಲೆಗಳಿಗೆ ರೂ. 20,000/-, 6ನೇ ಉನ್ನತೀಕರಿಸಿದ ಪ್ರತಿ ಹಿರಿಯ ಪ್ರಾಥಮಿಕ ಶಾಲೆಗೆ ರೂ. 50,000/- ಹಾಗೂ 8ನೇ ತರಗತಿಗೆ ಉನ್ನತೀಕರಿಸಿದ ಪ್ರತಿ ಹಿರಿಯ ಪ್ರಾಥಮಿಕ ಶಾಲೆಗೆ ರೂ. 15,000/- ರಂತೆ ನೀಡಲಾಗುವುದು. 2013-14ನೇ ಸಾಲಿನಲ್ಲಿ ಯಾವುದೇ ಹೊಸ ಶಾಲೆಗಳು, ಶಾಲೆಗಳ ಉನ್ನತೀಕರಣ ಮಂಜೂರಾಗಿರುವುದಿಲ್ಲ.

ಶಾಲಾ ಅನುದಾನ :

ಈ ಅನುದಾನವನ್ನು ಸರ್ಕಾರಿ, ಅನುದಾನಿತ ಹಾಗೂ ಸ್ಥಳೀಯ ಸಂಸ್ಥೆಗಳಿಂದ ನಡೆಸುತ್ತಿರುವ ಶಾಲೆಗಳಿಗೆ ನೀಡಲಾಗುತ್ತದೆ.

  • 1 ರಿಂದ 5ನೇ ತರಗತಿ ಹೊಂದಿರುವ ಪ್ರಾಥಮಿಕ ಶಾಲೆಗಳನ್ನು ಒಂದು ಘಟಕ ಎಂದು ಪರಿಗಣಿಸಿ ರೂ. 5,000/- ನೀಡಲಾಗುತ್ತಿದೆ.
  • 6 ರಿಂದ 7/8ನೇ ತರಗತಿ ಹೊಂದಿರುವ ಪ್ರಾಥಮಿಕ ಶಾಲೆಗಳನ್ನು ಒಂದು ಘಟಕ ಎಂದು ಪರಿಗಣಿಸಿ ರೂ. 7,000/- ನೀಡಲಾಗುತ್ತಿದೆ.
  • ಕಿರಿಯ ಹಾಗೂ ಹಿರಿಯ ಪ್ರಾಥಮಿಕ ಶಾಲಾ ತರಗತಿಯನ್ನು ಹೊಂದಿರುವ ಶಾಲೆಗಳನ್ನು ಎರಡು ಘಟಕಗಳು ಎಂದು ಪರಿಗಣಿಸಿ ರೂ. 12,000/- ನೀಡಲಾಗುತ್ತಿದೆ.

ಶಾಲಾ ಅನುದಾನವನ್ನು ಕೆಳಗೆ ನಮೂದಿಸಿರುವ ಚಟುವಟಿಕೆಗಳಿಗೆ ಬಳಸಲಾಗುವುದು :

  • ಶಾಲೆಗಳಲ್ಲಿನ ದಾಖಲೆ ಪುಸ್ತಕಗಳನ್ನು ನಿರ್ವಹಣೆ ಮತ್ತು ಶಾಲಾ ಸಾದಿಲ್ವಾರು ಖರೀದಿಗಾಗಿ.
  • ಪ್ರತಿ ಶಾಲೆಯಲ್ಲಿಯ ಶಾಲಭಿವೃದ್ದಿ ಯೋಜನೆ ಸಿದ್ಧಪಡಿಸಲು ಮತ್ತು ಅನುಷ್ಠಾನಗೊಳಿಸಲು
  • ತರಗತಿಯಲ್ಲಿ ಪಾಠಬೋಧನಾ ಸಂದರ್ಭದಲ್ಲಿ ಬೋಧನೋಪಕರಣಗಳ ಅವಶ್ಯಕತೆಯಿದ್ದಲ್ಲಿ ಈ ಅನುದಾನವನ್ನು ಬಳಸಬಹುದು.
  • ಶಾಲಾ ಅನುದಾನ ಮತ್ತು ನಿರ್ವಹಣಾ ಅನುದಾನದಲ್ಲಿ ಸಮುದಾಯದ ಸಹಭಾಗಿತ್ವದಲ್ಲಿ ಮೇಲ್ಕಂಡ ಚಟುವಟಿಕೆಗಳ ನಂತರ ಉಳಿಯುವ ಹಣದಲ್ಲಿ ಶಾಲೆಗೆ ದೂರದರ್ಶನ ಮತ್ತು Receive only terminal (ROT)ಖರೀದಿಸಲು ಬಳಸಬಹುದು.

ನಿರ್ವಹಣಾ ಅನುದಾನವನ್ನು ಕೆಳಗೆ ನಮೂದಿಸಿರುವ ಚಟುವಟಿಕೆಗಳಿಗೆ ಬಳಸಲಾಗುವುದು :

  • ಶಾಲಾ ಕಟ್ಟಡದ ರಕ್ಷಣೆ ಮತ್ತು ಸೌಂದರ್ಯವನ್ನು ಹೆಚ್ಚಿಸಲು ಅಗತ್ಯವಾದ ಚಟುವಟಿಕೆಗಳಾದ ಶಾಲೆಗಳಿಗೆ ಸುಣ್ಣ ಬಣ್ಣ ಮಾಡಿಸುವುದು, ಸಣ್ಣ ಪುಟ್ಟ ಕಟ್ಟಡ ದುರಸ್ಥಿ, ಪೀಠೋಪಕರಣಗಳ ದುರಸ್ಥಿ, ಪಾಠೋಪಕರಣಗಳ ದುರಸ್ಥಿ, ಕ್ರೀಡಾ ಸಾಮಗ್ರಿಗಳ ದುರಸ್ಥಿ, ವಿದ್ಯುಚ್ಛಕ್ತಿ ಬಿಲ್ ಪಾವತಿ, ದೂರವಾಣಿ ಬಿಲ್ ಪಾವತಿ, ಕುಡಿಯುವ ನೀರಿನ ವ್ಯವಸ್ಥೆ/ನಿರ್ವಹಣೆ ಮತ್ತು ಶೌಚಾಲಯಗಳ ನಿರ್ವಹಣೆಗಾಗಿ ಬಳಸಬಹುದಾಗಿದೆ.
  • ಉಳಿಕೆಯಾಗುವ ಅನುದಾನದಿಂದ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಇನ್ಸಿನಿರೇಟರ್ಸ್ (Incinerators) ಹಾಗೂ ಹೆಣ್ಣು ಮಕ್ಕಳಿಗಾಗಿ ಋತುಸ್ರಾವದ ಸಮಯದಲ್ಲಿ ಉಪಯೋಗಿಸಲ್ಪಡುವ ನ್ಯಾಪ್ ಕಿನ್ಸ್ಗಳನ್ನು ಖರೀದಿಸಲು ಬಳಸಿಕೊಳ್ಳಬಹುದಾಗಿ

ಶಿಕ್ಷಕರಿಗಾಗಿ ಸೇವಾ ಕಾಲೀನ ಸಾಮರ್ಥ್ಯವರ್ಧನೆ ಕಾರ್ಯಕ್ರಮಗಳು :

ಸರ್ವ ಶಿಕ್ಷಣ ಅಭಿಯಾನವು 6-14 ವಯೋಮಾನದ ಗುಂಪಿನ ಮಕ್ಕಳಿಗೆ ಗುಣಾತ್ಮಕ ಶಿಕ್ಷಣವನ್ನು ಒದಗಿಸುವ ಗುರಿಯನ್ನು ಹೊಂದಿರುವ ಮುಂಚೂಣಿ  ಕಾರ್ಯಕ್ರಮವಾಗಿದೆ. ಸಾರ್ವತ್ರಿಕ ಪ್ರವೇಶ ಅವಕಾಶ ಮತ್ತು ಉಳಿಸಿಕೊಳ್ಳುವಿಕೆ ಗುರಿಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಸಾಧಿಸಲಾಗಿದೆ. ಗುಣಾತ್ಮಕ ಶಿಕ್ಷಣವನ್ನು ಒದಗಿಸಲು ಎಸ್.ಎಸ್.ಎ ಕ್ರಮಗಳನ್ನು ಕೈಗೊಳ್ಳುತ್ತಿವೆ. ಈ ಸಂಬಂಧದಲ್ಲಿ ಕರ್ನಾಟಕದ ಸಾಧನೆಗಳನ್ನು  ರಾಷ್ಟ್ರಮಟ್ಟದಲ್ಲಿ ಪ್ರಶಂಸಿಸಲಾಗಿದೆ.
ಸರ್ವ ಶಿಕ್ಷಣ ಅಭಿಯಾನ ಪ್ರೇರಿತ ಉಪಕ್ರಮಗಳಿಗೆ ಸಂಬಂಧಿಸಿದಂತೆ ಶಿಕ್ಷಕ ತರಬೇತಿ ಪ್ರಕ್ರಿಯೆಯನ್ನು ರಾಜ್ಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿಯ ಶಿಖರ ಸಂಸ್ಥೆಯಾದ ಡಿ.ಎಸ್.ಇ.ಆರ್.ಟಿ. ಯು ನಡೆಸುತ್ತದೆ. ಡಿ.ಎಸ್.ಇ.ಆರ್.ಟಿ ಯು ರಾಜ್ಯದ ಉದ್ದಗಲದಲ್ಲಿ ಹರಡಿರುವ 30 ಡಯಟ್ ಗಳಿಗೆ ಹಣವನ್ನು ಬಿಡುಗಡೆ ಮಾಡುತ್ತದೆ. ಮುಖ್ಯವಾಗಿ ಸೇವಾನಿರತ ಶಿಕ್ಷಕರ ತರಬೇತಿಗಾಗಿ ತರಬೇತಿ ಯೋಜನೆ, ಸಿದ್ಧತೆ, ಅನುಷ್ಟಾನ ಮತ್ತು ಮೌಲ್ಯಮಾಪನವನ್ನು ನಿರ್ದೇಶನಾಲಯವು ನಿರ್ವಹಿಸುತ್ತದೆ. ಅಲ್ಲದೇ ಅನುಶೀಲನ ಮತ್ತು ವರದಿ ಮಾಡುವ ಕೆಲಸವನ್ನು ಸಹ ನಿರ್ದೇಶನಾಲಯವೇ ನಿರ್ವಹಿಸುತ್ತದೆ.

Free text books are provided to all children studying in Govt. Aided schools from class 1 to 8th.

  1. To all children within an upper ceiling of Rs.150 per child at primary level and Rs.250 per child at upper primary level.
  2. Primers / textbooks developed for tribal languages with bridging materials to facilitate a transition strategy to the State language of instruction and English, would be eligible for class I–II within the ceiling of Rs.150 per child.
  3. Within the ceiling of Rs.150 per child per year at primary level,States can support workbooks, worksheets and other essential teaching learning materials which together constitute textual materials for the subject, class or grade.States to continue to fund free textbooks being currently provided from the State Plans. States to continue to fund free textbooks being currently provided (2007-08) from the State Plans to non-SC/ST boys studying in Government and Government-aided primary and upper primary schools. The financial implication of this charge will be restricted to
  4. cost of free textbooks to non SC/ST boys only to those States where
    these are not being provided under any existing State schemes.
  5. In case any State is partially subsidizing the cost of textbooks being supplied to children in Elementary classes, then the assistance under SSA would be restricted to that portion of the cost of the books which is being borne by the children.